Property Rights-ತಂದೆಯ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಎಷ್ಟು ಪಾಲಿದೆ? ಇಲ್ಲಿದೆ ಅಗತ್ಯ ಮಾಹಿತಿ!
ಇದನ್ನೂ ಓದಿ: https://kannadatejas.com/birth-certificate-online-2026/
ನಮ್ಮ ಭಾರತದಲ್ಲಿ ಮಹಿಳೆಯರ Property Rights ವಿಚಾರದಲ್ಲಿ ಚರ್ಚೆಗಳು ನೆಡೆಯುತ್ತಿದ್ದು, “ಮಗಳು ಪರರ ವಸ್ತು”,”ಹೆಣ್ಣು ಹಡೆದವರು ಮಣ್ಣು ಹಡೆದರು” ಎಂಬ ಹಳೆಯ(Married Women Law) ಕಾಲದ ಮಾತುಗಳು ಇಂದು ಅರ್ಥಹೀನವಾಗಿವೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೆಣ್ಣುಮಕ್ಕಳು ಕೇವಲ ಮನೆಯ ಬೆಳಗುವ ದೀಪಗಳಷ್ಟೇ ಅಲ್ಲ, ಕುಟುಂಬದ ಆರ್ಥಿಕ ಮತ್ತು ಕಾನೂನುಬದ್ಧ ವಾರಸುದಾರರೂ ಹೌದು, ಮದುವೆಯಾದ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲ ಎಂಬ ತಪ್ಪು ಕಲ್ಪನೆಯೂ ನಮ್ಮೆಲ್ಲರ ತಪ್ಪು ಕಲ್ಪನೆ ಇತ್ತು,
ಆದರೆ ಕಾನೂನು ಪರಿಷ್ಕರಣೆಗಳ ನಂತರ, ವಿಶೇಷವಾಗಿ Hindu Succession (Amendment) Act, 2005 ಜಾರಿಗೆ ಬಂದ ನಂತರ, ಹೆಣ್ಣು ಮಕ್ಕಳಿಗೂ ಹಾಗೂ ಗಂಡು ಮಕ್ಕಳಿಗೂ(Property Inheritance India) ಸಮಾನ ಹಕ್ಕು ಪಡೆಯ ಬೇಕೆಂಬುದನ್ನು ಈ ಕಾಯ್ದೆ ಸ್ಪಷ್ಟಪಡಿಸಿದೆ.
ಇಂದು ಹೆಣ್ಣುಮಕ್ಕಳು ವಿವಾಹಿತರಾಗಿರಲಿ ಅಥವಾ ಅವಿವಾಹಿತರಾಗಿರಲಿ, ತಂದೆಯ ಪಿತ್ರಾರ್ಜಿತ Property ಮಗನಿಗೆ(Hindu Succession Act) ಇರುವಷ್ಟೇ ಸಮಾನವಾದ ಹಕ್ಕನ್ನು ಹೊಂದಿದ್ದಾರೆ. ಇದು ಕೇವಲ ಕಾನೂನು ನೀಡಿದ ಹಕ್ಕಲ್ಲ, ಬದಲಾಗಿ ಹೆಣ್ಣುಮಕ್ಕಳಿಗೆ ಸಮಾಜದಲ್ಲಿ ಗೌರವ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುವ ಒಂದು ದಾರಿಯಾಗಿದೆ.
ಇದನ್ನೂ ಓದಿ: https://kannadatejas.com/new-pan-rules-2026/
What are the types of property-ಆಸ್ತಿಯಲ್ಲಿ ಬರುವ ವಿಧಗಳಾವುವು?
ಆಸ್ತಿಯ ಹಕ್ಕನ್ನು 2 ವಿಧಗಳಾಗಿ ವಿಂಗಡಿಸಲಾಗುತ್ತದೆ:
1) ಪಿತ್ರಾರ್ಜಿತ ಆಸ್ತಿ/ಪರಂಪರಾ ಆಸ್ತಿ
2) ಸ್ವಯಾರ್ಜಿತ ಆಸ್ತಿ/ಸ್ವಯಂ ಸಂಪಾದಿತ
1) ಪಿತ್ರಾರ್ಜಿತ / ಪರಂಪರಾ ಆಸ್ತಿ (Ancestral Property)
ಪೀಳಿಗೆಯಿಂದ ಪೀಳಿಗೆಗೆ ಬಂದ, ಕನಿಷ್ಠ ನಾಲ್ಕು ತಲೆಮಾರುಗಳಿಂದ ಮುಂದುವರಿದ ಹಾಗೂ ಇನ್ನೂ ಕಾನೂನುಬದ್ಧವಾಗಿ ವಿಭಜನೆಯಾಗದ ಆಸ್ತಿಯನ್ನು ಪಿತ್ರಾರ್ಜಿತ ಆಸ್ತಿ ಎಂದು ಕರೆಯುತ್ತಾರೆ. ಈ ಆಸ್ತಿಯಲ್ಲಿ ಮಗ ಮತ್ತು ಮಗಳಿಗೆ ಹುಟ್ಟಿನಿಂದಲೇ ಸಮಾನ ಹಕ್ಕು ಇರುತ್ತದೆ. ಮದುವೆಯಾದರೂ ಈ ಹಕ್ಕು ಕಳೆದು ಹೋಗುವುದಿಲ್ಲ.
ಇನ್ನಷ್ಟು ಅನ್ವೇಷಿಸಿ
Insurance
Agriculture & Forestry
Family
Agricultural Equipment
2) ಸ್ವಯಾರ್ಜಿತ ಆಸ್ತಿ (Self-Acquired Property)
ತಂದೆ ಅಥವಾ ವ್ಯಕ್ತಿ ತನ್ನ ಸ್ವಂತ ಆದಾಯದಿಂದ ಸಂಪಾದಿಸಿದ ಆಸ್ತಿಯನ್ನು ಸ್ವಯಾರ್ಜಿತ ಆಸ್ತಿ ಎಂದು ಕರೆಯಲಾಗುತ್ತದೆ. ಈ ಆಸ್ತಿಯನ್ನು ಯಾರು ಪಡೆಯಬೇಕು ಎಂಬುದನ್ನು ಮಾಲೀಕರು ವಿಲ್ ಮೂಲಕ ನಿರ್ಧರಿಸಬಹುದು. ವಿಲ್ ಇಲ್ಲದೆ ಮೃತಪಟ್ಟರೆ, ಕಾನೂನಿನ ಪ್ರಕಾರ ವಾರಸುದಾರರಿಗೆ ಸಮಾನವಾಗಿ ಹಂಚಿಕೆ ಆಗುತ್ತದೆ.
ಇದನ್ನೂ ಓದಿ: https://kannadatejas.com/no-matter-how-much-money-is-deposited-in-the-bank/
ವಿನೀತಾ ಶರ್ಮಾ ವರ್ಸಸ್ ರಾಕೇಶ್ ಶರ್ಮಾ’ ಅವರು 2005ರ ತಿದ್ದುಪಡಿ ಮತ್ತು 2020ರ ಸುಪ್ರೀಂ ಕೋರ್ಟ್ ತೀರ್ಪು:
9 ಸೆಪ್ಟೆಂಬರ್ 2005 ರಂದು ತೀರ್ಪು ನೀಡಿದಾಗ ಅನೇಕ ಜನರಿಗೆ ಗೊಂದಲಮಯವಾಗಿತ್ತು, “ಕಾಯ್ದೆ ಜಾರಿಗೆ ಬಂದಾಗ ತಂದೆ ಜೀವಂತವಿರಬೇಕೆ?” ಆದರೆ
2020 ರಲ್ಲಿ ಸುಪ್ರೀಂ ಕೋರ್ಟ್ ‘ವಿನೀತಾ ಶರ್ಮಾ ವರ್ಸಸ್ ರಾಕೇಶ್ ಶರ್ಮಾ’ ಅವರು ಈ ಕೆಳಗೆ ತಿಳಿಸಿರುವ ತೀರ್ಪನ್ನು ನೀಡಿರುತ್ತಾರೆ:
ಮಗಳು ಜನಿಸಿದ ಕ್ಷಣದಿಂದಲೇ ಆಕೆಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ನೀಡಲಾಗುತ್ತದೆ.
2005ರಲ್ಲಿ ಕಾನೂನು ಜಾರಿಗೆ ಬಂದಾಗ ತಂದೆ ಬದುಕಿರಲೇಬೇಕು ಎಂದೇನಿಲ್ಲ. ತಂದೆ 2005 ಕ್ಕಿಂತ ಮೊದಲು ನಿಧನರಾಗಿದ್ದರೂ ಸಹ, ಮಗಳಿಗೆ ಹಕ್ಕು ಸಿಗುತ್ತದೆ.
ಮಗಳು ವಿವಾಹಿತಳಾಗಿರಲಿ ಅಥವಾ ಅವಿವಾಹಿತಳಾಗಿರಲಿ, ಹಕ್ಕಿನಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.
- Ministry of Law & Justice – Hindu Succession Act
👉 https://legislative.gov.in - Supreme Court of India
👉 https://www.sci.gov.in
ಇನ್ನಷ್ಟು ಅನ್ವೇಷಿಸಿ
Agriculture & Forestry
Insurance
Family
Agricultural Equipment
ಇದನ್ನೂ ಓದಿ: https://kannadatejas.com/kmf-shimul-recruitment-2026/
When does a daughter not get rights-ಮಗಳಿಗೆ ಹಕ್ಕು ಯಾವಾಗ ಸಿಗುವುದಿಲ್ಲ?
20 ಡಿಸೆಂಬರ್ 2004 ಕ್ಕಿಂತ ಮೊದಲು ಕಾನೂನುಬದ್ಧವಾಗಿ ಆಸ್ತಿ ವಿಭಜನೆ (Partition) ಅಥವಾ ಮಾರಾಟವಾಗಿದ್ದರೆ, ಅಂತಹ ಆಸ್ತಿಯಲ್ಲಿ ಮಗಳು ಮರು ಹಕ್ಕು ಕೇಳಲು ಸಾಧ್ಯವಿರುವುದಿಲ್ಲ.
ಮಗಳು ಸ್ವತಃ ಆಕೆಯೇ ‘ಹಕ್ಕು ತ್ಯಾಗ ಪತ್ರ’ (Relinquishment Deed) ಬರೆದುಕೊಟ್ಟಿದ್ದರೆ ಅವಳಿಗೆ ಆಸ್ತಿಯಲ್ಲಿ ಯಾವುದೇ ಹಕ್ಕು ಇರುವುದಿಲ್ಲ.
ಇದನ್ನೂ ಓದಿ: https://kannadatejas.com/rbi-new-rule-2026-cibil-score-change-kannada/
Will there be a share in property after marriage-ಮದುವೆಯ ನಂತರ ಆಸ್ತಿಯಲ್ಲಿ ಪಾಲಿರುತ್ತದೆಯೇ?
ಕಾನೂನಿನ ಪ್ರಕಾರ ಮಗಳು ಮದುವೆಯಾಗಿ ಬೇರೆ ಮನೆಗೆ ಹೋದರೂ ತನ್ನ ತಂದೆಯ ಮನೆಯ ಆಸ್ತಿಗೆ ‘ಹೊರಗಿನವಳಾಗುವುದಿಲ್ಲ. ಆಕೆ ತನ್ನ ತಂದೆಯ ಮನೆಯ ಸದಸ್ಯೆಯಾಗಿಯೇ ಇರುತ್ತಾಳೆ ಮತ್ತು ಆಸ್ತಿ ಹಂಚಿಕೆಯಲ್ಲಿ ಆಕೆಯನ್ನು ಹೊರಗಿಡುವ ಅಧಿಕಾರ ಯಾರಿಗೂ ಇಲ್ಲ.
Share in father’s self-acquired property-ತಂದೆಯ ಸ್ವಯಂ ಸಂಪಾದಿತ ಆಸ್ತಿಯಲ್ಲಿ ಪಾಲು:
ತಂದೆ ವಿಲ್ ಮಾಡದೆ ಮೃತಪಟ್ಟರೆ, ಹೆಣ್ಣು ಮಕ್ಕಳಿಗೂ ಸಮಾನ ಹಕ್ಕು ಇದೆ.
ತಂದೆ ವಿಲ್ ಮಾಡಿಕೊಂಡಿದ್ದರೆ, ಆಸ್ತಿ ವಿಲ್ನಲ್ಲಿ ಹೇಳಿಕೆಯಂತೆ ಆಸ್ತಿಯು ಹಂಚಿಕೆ ಆಗುತ್ತದೆ.
ಇದನ್ನೂ ಓದಿ: https://kannadatejas.com/electricity-price-hike-karnataka-2026/
Agriculture & Forestry
Family
Insurance
Agricultural Equipment
Documents Required-ಕಾನೂನುಬದ್ದವಾಗಿ ಮಗಳು ಆಸ್ತಿಯನ್ನು ಪಡೆಯಲು ಯಾವೆಲ್ಲ ದಾಖಲೆಗಳನ್ನು ನೀಡಬೇಕು?
ವಂಶವೃಕ್ಷ (Family Tree)
ಪಹಣಿ(RTC)
ಮ್ಯುಟೇಷನ್ ಪ್ರತಿಗಳು(Mutation Cetificates)
ನೋಂದಾಯಿತ ಪತ್ರಗಳು(Sale Deed)
ಮರಣ ಪ್ರಮಾಣಪತ್ರ(Death Certificate)
ವಂಶವೃಕ್ಷ (Family Tree)
ವಂಶವೃಕ್ಷವು ಕುಟುಂಬದ ಕಾನೂನುಬದ್ಧ ವಾರಸುದಾರರನ್ನು ಗುರುತಿಸುವ ಅತ್ಯಂತ ಮುಖ್ಯ ದಾಖಲೆ. ಇದು ಕುಟುಂಬದ ವಂಶ ಪರಂಪರೆಯನ್ನು ತೋರಿಸುವ ಅಧಿಕೃತ ದಾಖಲೆ ಆಗಿದ್ದು, ಆಸ್ತಿ ಹಂಚಿಕೆ ಸಂದರ್ಭದಲ್ಲಿ ಯಾರು ನಿಜವಾದ ಹಕ್ಕುದಾರರು ಎಂಬುದನ್ನು ಸ್ಪಷ್ಟಪಡಿಸುತ್ತದೆ.
ಸಾಮಾನ್ಯವಾಗಿ ವಂಶವೃಕ್ಷದಲ್ಲಿ ತಂದೆ, ತಾಯಿ, ಗಂಡು ಮಕ್ಕಳು, ಹೆಣ್ಣು ಮಕ್ಕಳು, ಪತ್ನಿ/ಪತಿ ಮತ್ತು ಇತರ ವಾರಸುದಾರರ ಹೆಸರುಗಳು ದಾಖಲಾಗಿರುತ್ತವೆ. ಈ ದಾಖಲೆ ಗ್ರಾಮ ಪಂಚಾಯಿತಿ, ತಹಶೀಲ್ದಾರ್ ಕಚೇರಿ ಅಥವಾ ನಗರ ಸ್ಥಳೀಯ ಸಂಸ್ಥೆಗಳ ಮೂಲಕ ನೀಡಲಾಗುತ್ತದೆ.
ಆಸ್ತಿ ಹಕ್ಕು ಸಂಬಂಧಿತ ಯಾವುದೇ ಕಾನೂನು ಪ್ರಕ್ರಿಯೆ — ಉದಾಹರಣೆಗೆ ವಾರಸುದಾರರ ಪ್ರಮಾಣಪತ್ರ, ಮ್ಯುಟೇಷನ್, ಆಸ್ತಿ ಹಂಚಿಕೆ — ಇವೆಲ್ಲಕ್ಕೂ ವಂಶವೃಕ್ಷ ಪ್ರಮುಖ ಆಧಾರ ದಾಖಲೆ ಆಗಿದೆ. ಕೋರ್ಟ್ ಅಥವಾ ಸರ್ಕಾರಿ ಕಚೇರಿಗಳಲ್ಲಿ ಹಕ್ಕು ಸಾಬೀತುಪಡಿಸಲು ಇದು ಅವಶ್ಯಕ ದಾಖಲೆ ಎಂದು ಪರಿಗಣಿಸಲಾಗುತ್ತದೆ.
✅ ಪಹಣಿ / RTC (Record of Rights, Tenancy and Crops)
ಪಹಣಿ ಅಥವಾ RTC ಎಂಬುದು ಭೂಮಿ ಸಂಬಂಧಿಸಿದ ಪ್ರಮುಖ ಸರ್ಕಾರಿ ದಾಖಲೆ. ಇದರಲ್ಲಿ ಆಸ್ತಿಯ ಮಾಲೀಕನ ಹೆಸರು, ಸರ್ವೇ ನಂಬರ್, ಜಮೀನು ಅಳತೆ, ಬೆಳೆ ವಿವರಗಳು ಹಾಗೂ ಹಕ್ಕುಸ್ವಾಮ್ಯದ ಮಾಹಿತಿ ದಾಖಲಿರುತ್ತದೆ. ಕರ್ನಾಟಕದಲ್ಲಿ ಭೂ ದಾಖಲೆಗಳ ಪರಿಶೀಲನೆಗೆ RTC ಅತ್ಯಂತ ವಿಶ್ವಾಸಾರ್ಹ ದಾಖಲೆ ಎಂದು ಪರಿಗಣಿಸಲಾಗುತ್ತದೆ.
ಆಸ್ತಿ ವಾರಸುದಾರಿಕೆ ಅಥವಾ ಹಂಚಿಕೆ ವೇಳೆ ಯಾರು ಭೂಮಿಯ ಕಾನೂನುಬದ್ಧ ಮಾಲೀಕರು ಎಂಬುದನ್ನು ತೋರಿಸಲು RTC ಬಳಸಲಾಗುತ್ತದೆ. ಮಗಳು ತನ್ನ ಪಾಲಿನ ಆಸ್ತಿಯನ್ನು ಪಡೆಯುವ ಸಂದರ್ಭದಲ್ಲಿ, ಆ ಭೂಮಿ ಕುಟುಂಬದ ಆಸ್ತಿ ಎಂಬುದನ್ನು ದೃಢೀಕರಿಸಲು RTC ಮುಖ್ಯ ದಾಖಲೆ ಆಗುತ್ತದೆ.
RTC ಅನ್ನು ಭೂಮಿ ದಾಖಲೆಗಳ ಅಧಿಕೃತ ಸಾಕ್ಷ್ಯವಾಗಿ ಕೋರ್ಟ್ ಹಾಗೂ ಸರ್ಕಾರಿ ಕಚೇರಿಗಳು ಅಂಗೀಕರಿಸುತ್ತವೆ. ಇದನ್ನು ಆನ್ಲೈನ್ ಮೂಲಕ Bhoomi portal ನಲ್ಲಿ ಅಥವಾ ತಹಶೀಲ್ದಾರ್ ಕಚೇರಿಯಲ್ಲಿ ಪಡೆಯಬಹುದು.
✅ ಮ್ಯುಟೇಷನ್ ಪ್ರಮಾಣಪತ್ರಗಳು (Mutation Certificates)
ಮ್ಯುಟೇಷನ್ ಪ್ರಮಾಣಪತ್ರ ಎಂದರೆ ಆಸ್ತಿಯ ಮಾಲೀಕತ್ವ ಬದಲಾವಣೆಯನ್ನು ಸರ್ಕಾರಿ ದಾಖಲೆಗಳಲ್ಲಿ ದಾಖಲಿಸುವ ಪ್ರಕ್ರಿಯೆಯ ದೃಢೀಕರಣ. ತಂದೆ ನಿಧನರಾದ ನಂತರ ಅಥವಾ ಆಸ್ತಿ ಹಂಚಿಕೆ ನಡೆದಾಗ, ಹೊಸ ವಾರಸುದಾರರ ಹೆಸರನ್ನು ಭೂ ದಾಖಲೆಗಳಲ್ಲಿ ಸೇರಿಸುವುದು ಮ್ಯುಟೇಷನ್ ಎಂದು ಕರೆಯಲಾಗುತ್ತದೆ.
ಈ ಪ್ರಮಾಣಪತ್ರವು ಆಸ್ತಿ ಯಾರ ಹೆಸರಲ್ಲಿ ಕಾನೂನುಬದ್ಧವಾಗಿ ದಾಖಲಾಗಿದೆ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಮಗಳು ತನ್ನ ಪಾಲಿನ ಆಸ್ತಿಯನ್ನು ಪಡೆಯುವ ಸಂದರ್ಭದಲ್ಲಿ, ಕುಟುಂಬ ಸದಸ್ಯರ ಹೆಸರನ್ನು ಸರಿಯಾಗಿ ದಾಖಲಿಸಿರುವುದನ್ನು ತೋರಿಸಲು ಮ್ಯುಟೇಷನ್ ದಾಖಲೆ ಬಹಳ ಮುಖ್ಯ.
ಬ್ಯಾಂಕ್ ಸಾಲ, ಆಸ್ತಿ ಮಾರಾಟ, ಕಾನೂನು ವ್ಯವಹಾರಗಳು ಸೇರಿದಂತೆ ಎಲ್ಲ ಸರ್ಕಾರಿ ಪ್ರಕ್ರಿಯೆಗಳಲ್ಲಿ ಮ್ಯುಟೇಷನ್ ದಾಖಲೆ ಕೇಳಲಾಗುತ್ತದೆ. ಇದನ್ನು ಗ್ರಾಮ ಪಂಚಾಯಿತಿ / ತಹಶೀಲ್ದಾರ್ ಕಚೇರಿಯಲ್ಲಿ ಅಥವಾ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯಬಹುದು.
✅ ನೋಂದಾಯಿತ ಆಸ್ತಿ ಪತ್ರಗಳು (Sale Deed)
Sale Deed ಎಂದರೆ ಆಸ್ತಿಯ ಖರೀದಿ–ಮಾರಾಟವನ್ನು ಕಾನೂನುಬದ್ಧವಾಗಿ ದೃಢಪಡಿಸುವ ಮುಖ್ಯ ದಾಖಲೆ. ಈ ಪತ್ರದಲ್ಲಿ ಆಸ್ತಿಯ ಮಾಲೀಕ ಯಾರು, ಯಾವ ದಿನ ಖರೀದಿಸಲಾಗಿದೆ, ಎಷ್ಟು ಮೊತ್ತಕ್ಕೆ ಖರೀದಿಸಲಾಗಿದೆ, ಆಸ್ತಿಯ ವಿವರಗಳು ಏನು ಎಂಬ ಎಲ್ಲಾ ಮಾಹಿತಿ ಸ್ಪಷ್ಟವಾಗಿ ಉಲ್ಲೇಖವಾಗಿರುತ್ತದೆ.
ಮಗಳು ತಂದೆಯ ಆಸ್ತಿಯಲ್ಲಿ ತನ್ನ ಹಕ್ಕು ಕೇಳುವ ಸಂದರ್ಭದಲ್ಲಿ, ಆ ಆಸ್ತಿ ನಿಜವಾಗಿಯೂ ಕುಟುಂಬಕ್ಕೆ ಸೇರಿದದ್ದೇ ಎಂಬುದನ್ನು ಸಾಬೀತುಪಡಿಸಲು Sale Deed ಅತ್ಯಂತ ಪ್ರಮುಖ ದಾಖಲೆ. ಇದು ಆಸ್ತಿಯ ಮೂಲ ಮಾಲೀಕತ್ವದ ಸಾಕ್ಷಿಯಾಗಿರುತ್ತದೆ.
Sale Deed ಇಲ್ಲದೆ ಆಸ್ತಿ ಹಕ್ಕು ಸಾಬೀತುಪಡಿಸುವುದು ಕಷ್ಟವಾಗಬಹುದು. ಆದ್ದರಿಂದ ನೋಂದಣಿ ಕಚೇರಿಯಲ್ಲಿ ದಾಖಲಾಗಿರುವ ಆಸ್ತಿ ಪತ್ರಗಳ ನಕಲು ಪ್ರತಿಯನ್ನು ಉಳಿಸಿಕೊಂಡಿರುವುದು ಬಹಳ ಮುಖ್ಯ.
✅ ಮರಣ ಪ್ರಮಾಣಪತ್ರ (Death Certificate)
ಮರಣ ಪ್ರಮಾಣಪತ್ರವು ವ್ಯಕ್ತಿಯ ನಿಧನವನ್ನು ಸರ್ಕಾರದ ದಾಖಲೆಗಳಲ್ಲಿ ಅಧಿಕೃತವಾಗಿ ದಾಖಲಿಸುವ ಕಾನೂನುಬದ್ಧ ದಾಖಲೆ. ತಂದೆಯ ಮರಣದ ನಂತರ ಆಸ್ತಿ ವರ್ಗಾವಣೆ ಅಥವಾ ಹಕ್ಕು ಹಂಚಿಕೆ ಪ್ರಕ್ರಿಯೆ ಆರಂಭಿಸಲು ಈ ದಾಖಲೆ ಕಡ್ಡಾಯವಾಗುತ್ತದೆ.
ಈ ಪ್ರಮಾಣಪತ್ರವು ಆಸ್ತಿಯ ಮೂಲ ಮಾಲೀಕ ಇನ್ನಿಲ್ಲ ಎಂಬುದನ್ನು ದೃಢಪಡಿಸುತ್ತದೆ. ಅದರಿಂದ ವಾರಸುದಾರರು ಕಾನೂನುಬದ್ಧವಾಗಿ ಆಸ್ತಿ ಮೇಲೆ ಹಕ್ಕು ಕೇಳಲು ಅವಕಾಶ ಸಿಗುತ್ತದೆ. ಬ್ಯಾಂಕ್, ರೆವಿನ್ಯೂ ಇಲಾಖೆ, ನ್ಯಾಯಾಲಯ ಅಥವಾ ನೋಂದಣಿ ಕಚೇರಿ ಎಲ್ಲೆಡೆ ಈ ದಾಖಲೆ ಕೇಳಲಾಗುತ್ತದೆ.
ಮರಣ ಪ್ರಮಾಣಪತ್ರ ಇಲ್ಲದೆ ಆಸ್ತಿ ಹಕ್ಕು ವರ್ಗಾವಣೆ ಪ್ರಕ್ರಿಯೆ ಬಹುತೇಕ ಮುಂದುವರಿಯುವುದಿಲ್ಲ. ಆದ್ದರಿಂದ ಸ್ಥಳೀಯ ನಗರಸಭೆ / ಗ್ರಾಮ ಪಂಚಾಯಿತಿಯಿಂದ ಈ ದಾಖಲೆಯನ್ನು ತಕ್ಷಣ ಪಡೆಯುವುದು ಅತ್ಯಂತ ಮುಖ್ಯ.
ಕೊನೆಯ ಮಾತು
ಇಂದಿನ ಕಾನೂನು ಪ್ರಕಾರ ಹೆಣ್ಣು ಮಕ್ಕಳು ಕುಟುಂಬದ ಸಮಾನ ವಾರಸುದಾರರು. ಸಮಾಜ ಬದಲಾಗುತ್ತಿದೆ — ಕಾನೂನು ಈಗಾಗಲೇ ಬದಲಾಗಿದೆ. ಹಕ್ಕು ತಿಳಿದುಕೊಳ್ಳುವುದು ಪ್ರತಿಯೊಬ್ಬ ಮಹಿಳೆಯ ಜವಾಬ್ದಾರಿ.
Do Fallow our Channel : WhatsApp
ಇ-ಸ್ವತ್ತು vs ಇ-ಖಾತಾ ಕರ್ನಾಟಕ: ಮನೆ ಮತ್ತು ಜಮೀನು ಮಾಲೀಕರು ತಿಳಿದುಕೊಳ್ಳಲೇಬೇಕಾದ ದೊಡ್ಡ ವ್ಯತ್ಯಾಸ